ರಾಜ್ಯಶ್ರೀ ಕುಮಾರಿ (ಜನನ ೪ ಜೂನ್ ೧೯೫೩) ಭಾರತದ ಮಾಜಿ ಸ್ಪರ್ಧಾ ಶೂಟರ್. ೧೯೬೮ ರಲ್ಲಿ, ೧೬ ನೇ ವಯಸ್ಸಿನ ರಾಜ್ಯಶ್ರೀಯವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. ಅವರು ಬಿಕಾನೇರ್‌ನ ಮಹಾರಾಜ ಡಾ. ಕರ್ಣಿ ಸಿಂಗ್ ಮತ್ತು ಮಹಾರಾಣಿ ಸುಶೀಲಾ ಅವರ ಪುತ್ರಿ. ಅವರು ಮಹಾರಾಜ ಗಂಗಾ ಸಿಂಗ್‌ಜಿ ಟ್ರಸ್ಟ್‌ನ ಅಧ್ಯಕ್ಷೆ ಮತ್ತು ಲಾಲ್‌ಗಢ ಅರಮನೆಯ ಮಾಲೀಕರಾಗಿದ್ದಾರೆ. ರಾಜ್ಯಶ್ರೀ ಅವರು ಅನೇಕ ಚಾರಿಟಬಲ್ ಟ್ರಸ್ಟ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಬಿಕಾನೇರ್‌ನಲ್ಲಿ ನೆಲೆಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ಮದುವೆಯಾದರು, ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಪಡೆದರು. ಅವರ ಮಗಳು ಅನುಪಮಾ ಕುಮಾರಿ ಮತ್ತು ಮಗ ಸಜ್ಜನ್ ಸಿನ್. == ವೃತಿ ಜೀವನ == ೧೯೬೦ - ಹನ್ನೆರಡು ವರ್ಷ ವಯಸ್ಸಿನ ಜೂನಿಯರ್ ವಿಭಾಗದಲ್ಲಿ, ಏಳು ವಯಸ್ಸಿನಲ್ಲಿ ಇವರು ರಾಷ್ಟ್ರೀಯ ಏರ್ ರೈಫಲ್ ಚಾಂಪಿಯನ್‍ಶಿಪ್ ಅನ್ನು ಗೆದ್ದರು. ೧೯೬೩ - ಹತ್ತು ವರ್ಷದವರಿದ್ದಾಗ ಓಪನ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗೆದ್ದರು. ೧೯೬೫ - ಹನ್ನೆರಡನೇ ವಯಸ್ಸಿನಲ್ಲಿ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಮತ್ತೆ ಗೆದ್ದರು. ೧೯೬೭ - ಅಹಮದಾಬಾದ್‍ನಲ್ಲಿ ನಡೆದ ಅಖಿಲ ಭಾರತ ಆಯ್ಕೆ ಟ್ರಯಲ್ಸ್‌ನಲ್ಲಿ ೧೪ ನೇ ವಯಸ್ಸಿನಲ್ಲಿ ಅವರು ೩೫೮/೪೦೦ ರ ಹೊಸ ರೈಫಲ್ ಶೂಟಿಂಗ್‍ನಲ್ಲಿ ೩೩೩ ಪಾಯಿಂಟ್‍ಗಳ ದೊಡ್ಡ ಅಂತರದಿಂದ ಗೆದ್ದರು. ಬೊಲೊಗ್ನಾದಲ್ಲಿ ನಡೆದ ವರ್ಲ್ಡ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮೂರನೇ ಸ್ಥಾನ ಪಡೆದರು. ೧೯೬೮ - ಮದ್ರಾಸ್‍ನಲ್ಲಿ ನಡೆದ ೧೩ ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯಾಶ್ರೀ ಕುಮಾರಿಯವರು ಶೂಟಿಂಗ್‍ನಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದರು. ೧೯೬೯ - ಭೋಪಾಲ್‍ನಲ್ಲಿ ನಡೆದ ೧೪ ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಿನ್ಸೆಸ್ ರಾಜ್ಯಾಶ್ರೀ ಕುಮಾರಿಯವರು ಲೇಡೀಸ್ ಒಲಂಪಿಕ್ ಕ್ಲೇ ಪಾರಿವಾಳ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಎರಡನೆಯ ಸ್ಥಾನ ಪಡೆದರು. ಈ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ೧೯೭೦ - ನ್ಯಾಷನಲ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ, ಅವರು ಟ್ರ್ಯಾಪ್ಶೂಟಿಂಗ್ (ಐ.ಆರ್) ನಲ್ಲಿ ೧೦೦ ರಲ್ಲಿ ೯೨ ಅಂಕ ಗಳಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿದರು. == ಪ್ರಶಸ್ತಿಗಳು == ಅರ್ಜುನ ಪ್ರಶಸ್ತಿ == ಉಲ್ಲೇಖಗಳು ==